ಪುರೂರವ

ಒಂದಾನೊಂದು ಕಾಲದಲ್ಲಿ

ಚೆಂದದಿಂದಿಹ ಪುರೂರವನೆಂಬರಸ,

ನಾಕಸುಂದರಿಗೆ ಮನಸೋತನಂದು.

ಮೂರು ನಿಯಮಗಳ ತಪ್ಪಿದೊಡೆ

ಮರಳಿ ಸೇರುವೆನಾ ಸಗ್ಗಕೆಂದು

ಸುರತಕೊದಗಿದಳ್ ಊರ್ವಶಿ.

ಮಿಲನೋತ್ಸವದೊಳು ಕಳೆಯಿತೆಷ್ಟೋ

ಕಾಲ, ಸುಲಲಿತಾಂಗಿಯ ತೋಳುಗಳ

ಬಳಸಿನಲಿ.

ಬಿದ್ದಿತು ನಿಯಮ, ಕದ್ದೊಯ್ದರು ಮೇಕೆಯ,

ಕತ್ತಲೆಯಲಿ ಸುಳಿಮಿಂಚದು ತೋರಿತು

ಬೆತ್ತಲೆಯ.

ವಿರಹದುರಿಗೆ ಬಳಲಿ ಬೆಂಡಾದನರಸ

ಮರಳಿ ಬಾ ಎಂದು ಕನವರಿಸುತಾ

ಅಸಮ ಸುಂದರಿಯ.

Leave a comment