ಮೌನ

ಮರೆಯದ ನೆನಪನು ಮನದಲ್ಲಿ ಉಳಿಸಿ ಉಲಿಸಿ ಮಾತಾಡದೆ ಮಾತುಮುರಿದೆ ಮಧುರಭಾಷಿಣಿ,
ಮಾತಾಡದ ಮಾತುಗಳಲಿ ಮೌನ ಮುರಿದು ಮಾತಾಡುತ್ತಿವೆ ನಿನ್ನದೇ ಮಾತುಗಳು ಮಂದಗಾಮಿನಿ.
ಮಾತುಮಾತಲಿ ಸುರಿದ ಮೋಹವರ್ಷ ಮತ್ತೆ ಮತ್ತೆ ನೆನಪಾಗಿ ಮಂಕುಕವಿದಿದೆ ಮನಕೆ ಮನೋಲ್ಲಾಸಿನಿ.
ಮೌನದಲಿ ಸವಿಮಾತುಗಳ ಮೆರವಣಿಗೆಗಳ ನೆನಪು ಮೌನವಗಿ ಬಿಕ್ಕುತಿದೆ
ಮಲ್ಲಿಕಾಹಾಸಿನಿ.

Leave a comment